``ವೇಷ`` ವೇಷಧಾರಿಗಳ ಮಧ್ಯದಲ್ಲಿ...! ರೇಟಿಂಗ್ : 3/5 ***
Posted date: 15 Sun, Oct 2023 10:14:46 AM
ವೇಷ.  ಓದು ಮುಗಿಸಿ ತಾಯಿಯ ಆಸೆಯಂತೆ ಕೆಲಸ ಹುಡುಕುತ್ತಿದ್ದ ರಘು ( ರಾಘವೇಂದ್ರ ದೇವಾಡಿಗ) ವನ್ನು ಬಿಸಿನೆಸ್ ಮ್ಯಾನ್ ತಂಗಿ ಸ್ವಾತಿ( ನಿಧಿ ಮರೋಲಿ) ಪ್ರೀತಿಸುತ್ತಾಳೆ. ಸ್ವಾಭಿಮಾನಕ್ಕೆ ಧಕ್ಕೆ ತರುವವರ ವಿರುದ್ಧ ಸಿಡಿದೆದ್ದು ನಿಂತ ರಘು, ಕೆಲಸಕ್ಕಾಗಿ ಪ್ರೇಯಸಿಯ ಪ್ರೀತಿಯನ್ನು ತ್ಯಾಗ ಮಾಡುತ್ತಾನೆ. ಇನ್ನು ರಘು ಗೆಳೆಯ ಹುಲಿ (ಮಂಜು ಪಾವಗಡ) ಸರ್ಕಾರಿ ಕೆಲಸದಲ್ಲಿದ್ದುಕೊಂಡು ಗೆಳೆಯನಿಗೆ ಸಾತ್ ನೀಡುತ್ತಾನೆ. ಇದರ ನಡುವೆ ಗ್ರಾಮದ ದೇವಸ್ಥಾನದ  ಪೂಜೆಗಾಗಿ ಬೇರೆ ಊರಿನ ಅರ್ಚಕರ ಕುಟುಂಬಕ್ಕೆ  ಗೌಡರ ಅನುಮತಿ ಕೊಡಿಸುತ್ತಾನೆ. ನಾಯಕನ  ಒಳ್ಳೆತನ ನೋಡಿದ ಅರ್ಚಕರ ಪುತ್ರಿ ಕಾವ್ಯ (ಸೌಖ್ಯ ಗೌಡ ) ರಘು ನನ್ನ ಪ್ರೀತಿಸುತ್ತಾಳೆ. ಅವನ ಮನೆಯ ತಾಯಿ , ತಂಗಿಗೂ ಹತ್ತಿರವಾಗುತ್ತಾಳೆ. ಆದರೆ ಊರ ಗೌಡರ ತಮ್ಮ ವಿನಯ್ ಗೌಡ (ಜಯ ಪ್ರಕಾಶ್ ಶೆಟ್ಟಿ) ನ ಕಣ್ಣು ಕಾವ್ಯ ಮೇಲೆ ಬೀಳುತ್ತದೆ.  ಆಕೆಯನ್ನು ಮದುವೆಯಾಗಲು  ಮುಂದಾಗುತ್ತಾನೆ. ಇದರ ನಡುವೆ ಅರ್ಚಕರ ವಾಸವಿದ್ದ ಮನೆಯಲ್ಲಿ ಆಗೋಚರ ಶಬ್ದಗಳು ಕೇಳಿಬರುತ್ತಿರುತ್ತದೆ. 

ಅದು ಏನು.. ಯಾರು... ಎಂದು ಹುಡುಕಾಟದಲ್ಲಿರುವಾಗಲೇ ವ್ಯಕ್ತಿಯೊಬ್ಬ  ಸಿಗುತ್ತಾನೆ. ಆತನೇ ರಘು ಆತ್ಮೀಯ ಗೆಳೆಯ ಹುಲಿ. ಅಲ್ಲಿಂದ ಮತ್ತೊಂದು ಕುಟುಂಬದ ಸಾವಿನ ಕಥೆ ತೆರೆದುಕೊಳ್ಳುತ್ತದೆ.  ಆ ಮನೆಯಲ್ಲಿ ಏನಿದೆ.?
ಸತ್ತವರು ಯಾರು... ? ವೇಷ ಹಾಕಿದ್ದು ಯಾಕೆ...?
 
ಈ ಎಲ್ಲಾ ಪ್ರಶ್ನೆಗಳಿಗೆ ಚಿತ್ರದ ಕ್ಲೈಮ್ಯಾಕ್ಸ್ ಉತ್ತರ ನೀಡುತ್ತದೆ. 
     
ಒಂದು ವಿಭಿನ್ನ ಚಿತ್ರವನ್ನ ತೆರೆಯ ಮೇಲೆ ತಂದಿರುವ ನಿರ್ಮಾಪಕ ರಾಘವೇಂದ್ರ ದೇವಾಡಿಗ, ರಂಗಭೂಮಿ ಪ್ರತಿಭೆಯಾಗಿದ್ದು , ಈ ಚಿತ್ರದಲ್ಲಿ  ನಾಯಕನ ಪಾತ್ರಕ್ಕೆ ಜೀವ ತುಂಬಿ ಅಭಿನಯಿಸಿದ್ದಾರೆ.   
ಇದು ಅವರ ಮೊದಲ ಪ್ರಯತ್ನ.
 
ಇನ್ನು ಗೆಳೆಯನಾಗಿ ಎರಡು ಶೇಡ್ ಗಳಲ್ಲಿ ಅಭಿನಯಿಸಿರುವ ಮಂಜು ಪಾವಗಡ ಪಾತ್ರವೇ  ಚಿತ್ರದ ಹೈಲೈಟ್.  ಅದೇ ರೀತಿ ತಾಯಿಯ ಪಾತ್ರದಲ್ಲಿ ನಟಿಸಿರುವ ವಾಣಿಶ್ರೀ ಸೇರಿದಂತೆ ಉಳಿದ ಕಲಾವಿದರು ಚಿತ್ರದ ಓಟಕ್ಕೆ ಸಾತ್ ನೀಡಿದ್ದಾರೆ. ಇನ್ನು  ಕೃಷ್ಣ  ನಾಡ್ಪಾಲ್ ಮೊದಲ ಪ್ರಯತ್ನದಲ್ಲೇ ಭೇಷ್  ಎನಿಸಿಕೊಳ್ಳುತ್ತಾರೆ.  ಇನ್ನು ಸಂಗೀತ ಚಿತ್ರದ ಕಥೆಗೆ ಪೂರಕವಾಗಿದೆ. ಜೊತೆಗೆ ಛಾಯಾಗ್ರಹಕರ ಕೈಚಳಕ ತಕ್ಕ ಮಟ್ಟಕ್ಕೆ ಮೂಡಿಬಂದಿದೆ. ಒಟ್ಟರೆ ಯುವ ಪ್ರತಿಭೆಗಳು ಸೇರಿ ಒಂದು ಉತ್ತಮ ಚಿತ್ರ ಕೊಡಲು ಪ್ರಯತ್ನಪಟ್ಟಿದ್ದಾರೆ. ವೀಕೆಂಡ್‌ನಲ್ಲಿ ಕುತೂಹಲ ಮೂಡಿಸುವ ಈ ವೇಷ ಚಿತ್ರವನ್ನು  ನೋಡಬಹುದು.
Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed